Sunday, February 28, 2021
Home ರಾಜ್ಯ ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆ ಇನ್ಸಿಟ್ಯೂಟ್ ಆಫ್...

ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿದ ಸಚಿವರು


ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆ
ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿದ ಸಚಿವರು

ಬೆಂಗಳೂರು, ಜ 15, 2020: ಲೆಕ್ಕಪರಿಶೋಧಕರು ತಮ್ಮ ವೃತ್ತಿಯಲ್ಲಿ ನೈತಿಕತೆ, ಮೌಲ್ಯ, ನಿಷ್ಠೆ ಇವುಗಳನ್ನು ಸಂಪೂರ್ಣವಾಗಿ ಪಾಲಿಸಿದರೆ ದೇಶದಲ್ಲಿ ದೊಡ್ಡ ಬದಲಾವಣೆ ಸಾದ್ಯ. ಇದರಿಂದ ದೇಶದ ಆರ್ತಿಕ ಕ್ಷೇತ್ರದಲ್ಲೂ ಕ್ರಾಂತಿಯನ್ನು ಮಾಡಬಹುದಾಗಿದೆ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ – ಬೆಂಗಳೂರು ಶಾಖೆಯ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಲಾಗಿರುವ “ಸದಸ್ಯರ ಲಾಂಜ್ ಹಾಗೂ ಹೊಸ ಐಟಿಟಿ ಪ್ರಯೋಗಾಲಯ” ಅನ್ನು ಶುಕ್ರವಾರ ಸಚಿವರು ಉದ್ಘಾಟಿಸಿ ಮಾತನಾಡಿದರು. “ಸಮಾಜದಲ್ಲಿರುವ ಕೆಲವೇ ನೈಜ ಕಾನೂನು ಪಾಲನೆ ಮತ್ತು ನೈತಿಕತೆಯನ್ನು ಹೊಂದಿರುವ ವೃತ್ತಿಗಳ ಪೈಕಿ ಚಾರ್ಟೆಡ್ ಅಕೌಂಟೆಂಟ್ ವೃತ್ತಿಯೂ ಒಂದು. ನಮ್ಮ ದೇಶದಲ್ಲಿ ಹಲವು ಸರ್ಕಾರಿ ಉದ್ಯೋಗಿಗಳಿದ್ದಾರೆ. ಆದರೆ, ಅಲ್ಪ ಮಾತ್ರದ ಸೇವೆ ಲಭ್ಯವಾಗುತ್ತಿದೆ. ಸಾಕಷ್ಟು ಕಾನೂನುಗಳಿವೆ ಮತ್ತು ಕೆಲವೇ ಜಾರಿಯಾಗುತ್ತಿವೆ. ಇವುಗಳನ್ನು ಮತ್ತಷ್ಟು ಸದೃಢಗೊಳಿಸಲು ಮತ್ತು ಸಂಯೋಜಿತಗೊಳಿಸಲು ಹೆಚ್ಚಿನ ನೈತಿಕ ಉದ್ಯೋಗಗಳ ಅಗತ್ಯವಿದೆ” ಎಂದರು.

“ಜಿ ಎಸ್‌ ಟಿ ಮಂಡಳಿ ಸದಸ್ಯರಾಗಿರುವ ನನಗೆ ತೆರಿಗೆಗಳನ್ನು ವಿಧಿಸುವ ವಿಧಾನದ ಕುರಿತು ತಿಳಿದಿದೆ. ತೆರಿಗೆ ಪಾವತಿದಾರರು ಮತ್ತು ಸರ್ಕಾರದ ನಡುವೆ, ಲೆಕ್ಕ ಪರಿಶೋಧಕರು ಸೇತುವೆಯಾಗಿ ಕೆಲಸ ಮಾಡುತ್ತಾರೆ. ಲೆಕ್ಕ ಪರಿಶೋಧಕರು, ಸರ್ಕಾರದ ತೆರಿಗೆ ನೀತಿಗಳ ಕುರಿತು ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ರಚನಾತ್ಮಕ ಸಲಹೆಗಳನ್ನು ನೀಡಬೇಕು” ಎಂದು ಸಲಹೆ ನೀಡಿದರು.

“ಸಾಕಷ್ಟು ಶ್ರಮವಹಿಸಿ ಈ ಹುದ್ದೆಯನ್ನು ತಲುಪಿದ ಲೆಕ್ಕ ಪರಿಶೋಧಕರು, ಸಮಾಜದ ಇತರ ಜನರ ನೆರವಿಗೆ ಮುಂದಾಗಬೇಕು. ಬ್ಯುಸಿನೆಸ್ ಕ್ಷೇತ್ರದಲ್ಲಿ ಚಾರ್ಟೆಡ್ ಅಕೌಂಟೆಂಟ್ ಅತ್ಯಂತ ಪ್ರಭಾವಿ ವ್ಯಕ್ತಿಗಳಾಗಿರುತ್ತಾರೆ. ಅದನ್ನು ಸಮಾಜದ ಉತ್ತಮ ಕಾರ್ಯಗಳಿಗಾಗಿ ಬಳಸಿಕೊಳ್ಳಬೇಕು. ಜನರಲ್ಲಿ ತೆರಿಗೆ ಪಾವತಿ ಕುರಿತು ನೈತಿಕ ಭಾವನೆಗಳನ್ನು ತುಂಬಲು ಯತ್ನಿಸಬೇಕು” ಎಂದು ಕರೆ ನೀಡಿದರು.

“ನಮ್ಮ ವ್ಯವಹಾರ ಮತ್ತು ವರ್ತನೆಗಳಿಗೆ ನಮಗೆ ನಾವೇ ಉತ್ತರದಾಯಿಗಳಾಗಿರುತ್ತೇವೆ. ಆದರೆ, ಮನುಷ್ಯನ ಗುಣವೆಂದರೆ ಆತನಿಗೆ ಸ್ವಯಂ ನಿಯಂತ್ರಣ ಇಲ್ಲ. ಊಟ, ನಿದ್ರೆ ಮತ್ತು ಜೀವನ ನಡೆಸುವ ಕುರಿತು ಕೂಡ ಯಾವುದೇ ಸ್ವಯಂ ನಿಯಂತ್ರಣವಿರುವುದಿಲ್ಲ. ಆದ್ದರಿಂದ ತಮ್ಮ ವ್ಯವಹಾರದ ಮೇಲೆ ನಿಯಂತ್ರಣವಿಡುವುದು ಕೂಡ ಆತನಿಗೆ ಕಷ್ಟವಾಗುತ್ತಿದೆ. ಇದರ ಪರಿಣಾಮವಾಗಿಯೇ ಲೆಕ್ಕಪರಿಶೋಧಕರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ” ಎಂದು ಹೇಳಿದರು.

“ಮೊದಲ ಮಹಾಯುದ್ಧವನ್ನು ಸರಿಯಾಗಿ ನಿರ್ವಹಿಸಲು, ಪರಿಶೀಲಿಸಲು ಸಾಧ್ಯವಾಗಿರಲಿಲ್ಲ. ಆದರೆ, ಎರಡನೇ ಮಹಾಯುದ್ಧವನ್ನು ದೇಶಗಳ ಸಾಮರ್ಥ್ಯ ಪ್ರದರ್ಶನ, ಗೆಲುವು ಮತ್ತು ಸೋಲುಗಳ ಲೆಕ್ಕದಲ್ಲಿ ಪರಿಶೋಧನೆ ನಡೆಸಲಾಗಿತ್ತು. ಯುದ್ಧದಲ್ಲಿ ಗೆಲುವು ಸಾಧಿಸಿದ ರಾಷ್ಟ್ರಗಳಲ್ಲೂ ಉಂಟಾಗಿರುವ ನಷ್ಟವನ್ನು ವಿಶ್ಲೇಷಣೆ ಮಾಡಲಾಗಿತ್ತು. ಯುದ್ಧದಲ್ಲಿ ಬಳಸಿದ ತಂತ್ರಜ್ಞಾನವನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿತ್ತು”

“ಆರ್ಥಿಕತೆ ಮತ್ತು ಸಿದ್ಧಾಂತ ಜೊತೆಜೊತೆಯಲ್ಲಿ ಸಾಗುತ್ತವೆ. ಸಿದ್ಧಾಂತವಿಲ್ಲದ ಆರ್ಥಿಕತೆ ಅರ್ಥಹೀನವಾಗುತ್ತದೆ ಮತ್ತು ಆರ್ಥಿಕ ನೆರವಿಲ್ಲದ ಸಿದ್ಧಾಂತ ಸಮೃದ್ಧಿ ಹೊಂದಲಾರದು” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಬೆಂಗಳೂರು ಶಾಖೆ ಅಧ್ಯಕ್ಷರಾದ ರವೀಂದ್ರ ಕೋರೆ, ಕಾರ್ಯದರ್ಶಿ ಎಸ್.ಎ.ಶ್ರೀನಿವಾಸ ಟಿ, ಐಸಿಎಐ ಮಾಜಿ ಅಧ್ಯಕ್ಷ ಬಿ.ಪಿ.ರಾವ್ ಮತ್ತು ಕೆ.ರಘು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಅವರು, ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಬೆಂಗಳೂರು ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಅವರು, ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕನ್ನಡದ ಬಿಗ್ ಬಾಸ್...

15 ದಿನಗಳಲ್ಲಿ ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಗುತ್ತಿಗೆದಾರರ ಸಂಘದ ಎಚ್ಚರಿಕೆ

ರಾಜ್ಯದ ಗುತ್ತಿಗೆದಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ರಾಜ್ಯ ಗುತ್ತಿಗೆದಾರರ ಸಂಘದ ಮನವಿಬೆಂಗಳೂರು ಜನವರಿ 20: ಕೋವಿಡ್‌ - 19 ಸಂಕಷ್ಟ ರಾಜ್ಯದಲ್ಲಿ ಆವರಿಸಿದ ನಂತರ ರಾಜ್ಯ ಸರಕಾರವು ನಮ್ಮೆಲ್ಲಾ ವಹಿವಾಟುಗಳಿಗೆ...

ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿದ ಸಚಿವರು

ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿದ ಸಚಿವರು

ನವೋದಯ ಬಳಗದ ವತಿಯಿಂದ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ವಿಶೇಷ ತರಬೇತಿ ಶಾಲೆ

ಬಹುದಿನಗಳ ಕನಸು ನನಸಾದ ದಿನವಿದು. ನವೋದಯ ಬಳಗದ ವತಿಯಿಂದ ಈ ವರ್ಷ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಬೇತಿ ಶಾಲೆಯನ್ನು ತೆರೆಯಲಾಗಿದೆ.

Recent Comments