ಬಹುದಿನಗಳ ಕನಸು ನನಸಾದ ದಿನವಿದು. ನವೋದಯ ಬಳಗದ ವತಿಯಿಂದ ಈ ವರ್ಷ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಬೇತಿ ಶಾಲೆಯನ್ನು ತೆರೆಯಲಾಗಿದೆ.

ಈ ಶಾಲೆ ದಿನ ಬಿಟ್ಟು ದಿನ ಸಂಜೆ 6 ರಿಂದ 8 ಗಂಟೆವರೆಗೆ ನೆಡೆಯಲಿದ್ದು, ವಿಷಯವಾರು ನುರಿತ ಶಿಕ್ಷಕರು ಭೋದನೆ ಮಾಡುತ್ತಾರೆ. ಶಾಲೆ ಪ್ರಾರಂಭವಾಗಿ ಒಂದು ವಾರ ಕಳೆದಿದೆ. ಸುಮಾರು 25 ವಿದ್ಯಾರ್ಥಿಗಳು ಬರುತ್ತಿದ್ದಾರೆ.

ವಿಷಯ ತಿಳಿದ ಸಿರಾ ತಾಲ್ಲೋಕಿನ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಶಂಕರ್ ರವರು ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಪ್ರಶoಸೆ ವ್ಯಕ್ತಪಡಿಸಿ, ಅಗತ್ಯ ಸಲಹೆ ಸೂಚನೆ ಮತ್ತು ಸಹಕಾರ ನೀಡುವುದಾಗಿ ಹೇಳಿದರು.

ನವೋದಯ ಬಳಗದಿಂದ ಕಳೆದ ವರ್ಷ ವಿಶೇಷ “ಸಂಜೆ ಶಾಲೆ” ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೆವು. ಕೊರಾನ ಕಾರಣದಿಂದಾಗಿ ಮುಂದೂಡಿದ್ದೆವು. ಈ ವರ್ಷವೂ ಸಂಜೆ ಶಾಲೆ ತೆರೆಯುವುದು ಬೇಡ ಎಂಬ ಅತಂತ್ರ ಮನಸ್ಥಿತಿಯಲ್ಲಿದ್ದ ನಮಗೆ ಪ್ರಾರಂಭಿಸುವಂತೆ ಪ್ರೇರಣೆ, ಪ್ರೋತ್ಸಾಹ ನೀಡಿ ಮತ್ತು ತಮ್ಮ ಅಮೂಲ್ಯ ಸಮಯವನ್ನು ಸಂಜೆ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿರುವ ಶಿಕ್ಷಕ ಮಿತ್ರರಾದ ರಾಜಣ್ಣ ಮತ್ತು ರಾಮರಾಜ್ ರವರಿಗೆ ಆತ್ಮೀಯ ಧನ್ಯವಾದಗಳು.
ವಿಶೇಷ ತರಗತಿಗಳಿಗೆ ಬರಲಿಚ್ಚಿಸುವ ವಿದ್ಯಾರ್ಥಿಗಳು ಸರ್ಕಾರ ತಿಳಿಸಿರುವ ಕೊರಾನ ಮಾರ್ಗಸೂಚಿ ಅನ್ವಯ ಅಗತ್ಯ ಸಿದ್ಧತೆಗಳೊಂದಿಗೆ ಹಾಜರಾಗುವುದು.
ಸ್ಥಳ- ರಂಗನಾಥನಗರ ಶಾಲೆ (ಸಿರಾ ಟೌನ್) ಸಮಯ ಸಂಜೆ- 6 ರಿಂದ 8.