Wednesday, March 3, 2021
Home Uncategorized ತುಮಕೂರು ಜಿಲ್ಲೆಯ ಬೋರನಕಣಿವೆ ಜಲಾಶಯದ ಇತಿಹಾಸ

ತುಮಕೂರು ಜಿಲ್ಲೆಯ ಬೋರನಕಣಿವೆ ಜಲಾಶಯದ ಇತಿಹಾಸ

ತುಮಕೂರು ಜಿಲ್ಲೆಯ #ಬೋರನಕಣಿವೆ ಜಲಾಶಯದ ಇತಿಹಾಸ:

ಅಣೆಕಟ್ಟಿನ ಪರಿಚಯ:

ತುಮಕೂರಿನಿಂದ 72 ಕಿಲೋಮೀಟರ್ ದೂರದಲ್ಲಿರುವ ಚಿಕ್ಕನಾಯಕನಹಳ್ಳಿ ತೆಂಗಿನಕಾಯಿಗೆ ಹೆಸರಾಗಿದೆ. ಯಾರನ್ನಾದರೂ ಅಣಕಿಸುವಾಗ “ಚಿಕ್ಕನಾಯಕನಹಳ್ಳಿಯ ಚಿಪ್ಪು” ಕೊಡೆತ್ತೇನೆ ನಿನಗೆ ಎಂದು ಉದಾಹರಣೆ ಕೊಡುತ್ತಾರೆ.

ಗುಡ್ಡ ಸೀಳಿದಂತೆ ಕಾಣುವ ಪುಟ್ಟ ರಸ್ತೆ. ಇಕ್ಕೆಲಗಳಲ್ಲಿ ಮುಗಿಲೆತ್ತರದ ಮರಗಳು. ತೋರಣದಂತೆ ಬಳ್ಳಿಗಳು. ಚಿಲಿಪಿಲಿ ಹಕ್ಕಿಗಳ ಕಲರವ. ಎಡಬದಿಯಲ್ಲಿ ಹಸಿರು ಹೊದ್ದ ಬೆಟ್ಟ. ಬಲ ಬದಿಯಲ್ಲಿ ಇಳಿಜಾರಿನ ಅಂಗಳ. ಬೆಟ್ಟಗಳ ಹಿಂಬದಿಯಲ್ಲಿ ಸೂರ್ಯನ ಕಿರಣಗಳನ್ನು ಪ್ರತಿಫಲಿಸುವ ಕಿರು ಜಲಾಶಯದ ಹಿನ್ನೀರು.

ಚಿಕ್ಕನಾಯಕನಹಳ್ಳಿಯಿಂದ ಪಶ್ಚಿಮದ ಈಶಾನ್ಯ ಮೂಲೆಗೆ 35 ಕಿಲೋ ಮೀಟರ್ ದೂರದಲ್ಲಿ “ಬೋರನ ಕಣಿವೆ” ಅಣೆಕಟ್ಟು ಎಂಬುದೊಂದಿದೆ. ಇದೊಂದು ಚಿಕ್ಕ ಡ್ಯಾಂ. #ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

ಮೈಸೂರು ಮಹಾರಾಜರಾದ ಬಹದ್ದೂರ್ ಬಿರುದಾಂಕಿತ #ಚಾಮರಾಜೇಂದ್ರಒಡೆಯರ್ ಅವರು ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹಕ್ಕೆ ಇವೆಲ್ಲ ಬಹುದೊಡ್ಡ ಸಾಕ್ಷಿಗಳಾಗಿವೆ.

ಇತಿಹಾಸ:

ಎರಡು ಗುಡ್ಡಗಳ ನಡುವೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟೆಯೇ ಬೋರನ ಕಣಿವೆ ಜಲಾಶಯ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕನ್ನಂಬಾಡಿ ಕಟ್ಟೆ (ಕೆ‌.ಆರ್.ಎಸ್) ಗಿಂತಲೂ ಮೊದಲೇ ನಿರ್ಮಾಣವಾದದ್ದು ಈ ಬೋರನ ಕಣಿವೆ ಜಲಾಶಯ.

ಅಣೆಕಟ್ಟಿನ ನಿರ್ಮಾಣ ಕಾರ್ಯ ಮೇ ತಿಂಗಳು 1888ನೇ ಇಸವಿಯಲ್ಲಿ ಪ್ರಾರಂಭಿಸಿ ಅಕ್ಟೋಬರ್ ತಿಂಗಳು 1892ನೇ ಇಸವಿಯಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆಗೊಂಡಿದೆ. ಈಗ ಈ ಅಣೆಕಟ್ಟೆಗೆ ಬರೋಬ್ಬರಿ 125 ವರ್ಷಗಳಾಗಿದೆ.

ಬೋರ ಎಂಬ ಕುರಿ ಕಾಯುವ ಯುವಕನ ಮನವಿ ಮೇರೆಗೆ ನಿರ್ಮಾಣವಾದ ಡ್ಯಾಂ ಇದು ಆದ್ದರಿಂದಲೇ ಬೋರನಕಣಿವೆ ಎಂಬ ಹೆಸರುಬಂದಿದೆ

ಇದನ್ನು ಕಟ್ಟಿಸಿದವರು ಮೈಸೂರು ಸಂಸ್ಥಾನದ ಮಹಾರಾಜರಾದ ಬಹದ್ದೂರ್ ಬಿರುದಾಂಕಿತ ಚಾಮರಾಜೇಂದ್ರ ಒಡೆಯರ್ 1888 ಮತ್ತು 1992ರ ಅವಧಿಯಲ್ಲಿ ಮೈಸೂರು ರಾಜ್ಯದ ಆಳ್ವಿಕೆಯಲ್ಲಿತ್ತು, ಈ ಬೋರನ ಕಣಿವೆ ಜಲಾಶಯ. ಆಗ ದಿವಾನರಾಗಿದ್ದವರು #ಕೆಶೇಷಾದ್ರಿಅಯ್ಯರ್.

ಈ ಅಣೆಕಟ್ಟು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಮುಖ್ಯ ಎಂಜಿನಿಯರ್ #ಕರ್ನಲ್ಮೈಕನಿಲ್ #ಕ್ಯಾಂಪೈಲರ್ಸಿಬವನ್, ಸಹಾಯಕ ಮುಖ್ಯ ಎಂಜಿನಿಯರ್ #ಡಬ್ಲುಮೆಕಚಿನ್ಯಸ್ಕೊಯಿರ್ ಮತ್ತು ಕಾರ್ಯ ನಿರ್ವಾಹಕ ಎಂಜಿನಿಯರ್ #ರಾಘವಲುನಾಯ್ಡು ಎಂಬವರು.

ಈ ಜಲಾಶಯ ನಿರ್ಮಿಸಲು ಬರ ಪರಿಹಾರ ಕಾಮಗಾರಿಯಾಗಿ ಅಂದಿನ ಮಹಾರಾಜರು ನೀಡಿದ ಆದೇಶದಂತೆ ನಿರ್ಮಾಣ ಮಾಡಲಾಗಿತ್ತು. ಆಗ ಇದಕ್ಕೆ ತಗುಲಿದ ವೆಚ್ಚ 2,20,000 (ಎರಡು ಲಕ್ಷದ ಇಪ್ಪತ್ತು ಸಾವಿರ) ರೂಪಾಯಿಗಳು.

ಜಲಾಶಯದ ಮುಂಭಾಗದಲ್ಲಿ ಪುರಾತನವಾದ #ಭೈರವೇಶ್ವರನ ದೇವಸ್ಥಾನ ಇದೆ. ಹಾಗಾಗಿ ಈ ಪ್ರದೇಶಕ್ಕೆ ಭೈರವ ಕಣಿವೆ ಎಂಬ ಹೆಸರಿತ್ತು, ಬೋರನ ಮನವಿ ಮೇರೆಗೆ ನಿರ್ಮಾಣವಾದ ಡ್ಯಾಂ ಆದರಿಂದ ಕ್ರಮೇಣ ಬೋರನಕಣಿವೆ ಎಂದಾಯಿತು.

ಅಣೆಕಟ್ಟೆಯ_ಉಪಯೋಗ:

ಈ ಅಣೆಕಟ್ಟೆಗೆ ಹಲವಾರು ಕೆರೆಗಳ ಕೋಡಿಬಿದ್ದ ನೀರು ಹರಿದು ಬರುತ್ತದೆ. 2002 ಎಕರೆ 31 ಗುಂಟೆ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಿರುವ ಈ ಅಣೆಕಟ್ಟೆಯ ಸಾಗುವಳಿ ಭೂಮಿಯು ಬೆಳ್ಳಾರ, ಬೋರನ ಕಣಿವೆ ಅಂಬಾಪುರ, ಹೊಯ್ಸಳ ಕಟ್ಟೆ, ದಬ್ಬಗುಂಟೆ, ಮರೇನಡು, ಮುತ್ತುಗದ ಹಳ್ಳಿಗಳಿಗೆ ಸೇರಿದೆ. ಇದರಲ್ಲಿ 845 ಎಕರೆಯಷ್ಟು ಪ್ರದೇಶ ಮಾತ್ರ ರೈತರ ಉಳುಮೆಗೆ ಸೇರಿದ್ದು, ಮಿಕ್ಕಿದ್ದು ಬೀಳು ಬಿದ್ದಿದೆ.

ಪ್ರೇಕ್ಷಣೀಯ_ಸ್ಥಳಗಳು:

ಈ ಕಣಿವೆಯನ್ನು ಬಳಸಿಕೊಂಡು ಎರಡೂ ಗುಡ್ಡಗಳನ್ನು ಪ್ರಕೃತಿದತ್ತ ಏರಿಗಳನ್ನಾಗಿಸಿ ಒಂದು ಚಿಕ್ಕ ಅಣೆಕಟ್ಟೆಯನ್ನು ಕಟ್ಟಲಾಗಿದೆ. ಬೋರನ ಕಣಿವೆ ಡ್ಯಾಂ ಚಿಕ್ಕನಾಯಕನಹಳ್ಳಿಯಂತಹ ಬರದ ನಾಡಿನಲ್ಲೂ ಸದಾ ನೀರು ತುಂಬಿಸಿಕೊಂಡು ಸುತ್ತಮುತ್ತಲಿನ ಪ್ರದೇಶಗಳನ್ನು ಹಚ್ಚಹಸಿರಾಗಿರುವಂತೆ ಮಾಡಿದೆ.

ಇಲ್ಲಿ ಡ್ಯಾಂ ಇದೆಯಾ ಎಂದು ಆಶ್ಚರ್ಯಪಡಬೇಕು ಹಾಗಿದೆ ಇದಕ್ಕೆ ನೀರು ಎಲ್ಲಿಂದ ಹರಿಯುತ್ತದೆ? ಸದಾ ಡ್ಯಾಂ ತುಂಬಿರುವುದು ಸಾಧ್ಯವೇ? ಎಂಬ ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರವಾಗಿ ಇಲ್ಲಿ ನೀರು ಮೈಚಾಚಿ ಮಲಗಿದೆ. ಅಣೆಕಟ್ಟೆಯ ಮೇಲೆ ನಿಂತು ನೋಡಿದರೆ ಹನ್ನೆರಡು ಕಿಲೋಮೀಟರ್ ದೂರದ ತನಕ ನೀರು ನಿಲ್ಲುವ ಜಾಗದ ವಿಸ್ತಾರ ಕಾಣುತ್ತದೆ ಇದು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಡ್ಯಾಂ ನ ನೀರು ನಿಲ್ಲುವ ಪಶ್ಚಿಮದ ಅಂಚಿನಲ್ಲಿ ಕಾರೇಹಳ್ಳಿ ಪುರಾತನವಾದ #ರಂಗನಾಥಸ್ವಾಮಿಯ ದೇವಸ್ಥಾನವಿದೆ.

ಅಣೆಕಟ್ಟೆಗೂ ಇಲ್ಲಿಗೂ 6 ಕಿಲೋಮೀಟರ್ ಅಂತರವಿದೆ. ಪ್ರತಿ ವರ್ಷವೂ ಈ ದೇವಸ್ಥಾನದ ಹತ್ತಿರ ದೇವರ ಉತ್ಸವ ನಡೆಯುತ್ತದೆ. ಇಲ್ಲಿ #ದನದ_ಜಾತ್ರೆ ನಡೆಯುತ್ತದೆ. ಇದು ಬಹಳ ದೊಡ್ಡ ಜಾತ್ರೆ. ಮಳೆ ಅಧಿಕವಾಗಿ ಬಿದ್ದು ಬೋರನ ಕಣಿವೆ ತುಂಬಿದಾಗ ಕೆಲವು ಬಾರಿ ಡ್ಯಾಂ ನೀರಿನಲ್ಲಿ ದೇವಸ್ಥಾನ ಸಂಪೂರ್ಣ ಮುಳುಗಿ ಹೋಗುತ್ತದೆ. ಗೋಪುರದ ಕಳಸ ಮಾತ್ರ ದೂರಕ್ಕೆ ಗೂಟದಂತೆ ಕಾಣುತ್ತದೆ. ಹೀಗೆ ದೇವಸ್ಥಾನ ಮುಳುಗಿದಾಗ ಪೂಜೆಗೆ ಅಡಚಣೆಯಾಗದಂತೆ ಮತ್ತೊಂದು ಸುರಕ್ಷಿತ ಜಾಗದಲ್ಲಿ ದೇವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.

ಹಾಗೇಯೇ ಈ ಸುವಣ೯ಮುಖಿ ನದಿ ದಡದಲ್ಲಿ ಸುತ್ತಲಿನ 16 ಹಳ್ಳಿ ಜನರ ಆರಾಧ್ಯ ದೈವ ಯರಹಳ್ಳಿಯ #ಶ್ರೀಕೆಂಪಮ್ಮ ದೇವಿ ಅಮ್ಮನವರ ದೇವಸ್ಥಾನವಿದೆ.

ಬೋರನ ಕಣಿವೆಗೆ ವಿದೇಶದಿಂದ ಪಕ್ಷಿಗಳು ವರ್ಷಕ್ಕೊಮ್ಮೆ ವಲಸೆ ಬಂದು ಸಂತಾನೋತ್ಪತ್ತಿ ಮಾಡುತ್ತವೆ. ಚಿಕ್ಕಕೆರೆಗಳಲ್ಲಿ ನೀರಿಲ್ಲದಿರುವುದರಿಂದ ಈ ಪಕ್ಷಿಗಳು ಆಹಾರಕ್ಕಾಗಿ ತುಮಕೂರು ಜಿಲ್ಲೆಯ ಹೇಮಾವತಿ ನೀರಿನಾಶ್ರಯಗಳಾದ ಬೋರನ ಕಣಿವೆ ಮತ್ತು ಸುತ್ತ ಮುತ್ತಲಿನ ಜಲಾಶಯಗಳಿಗೆ ಹೋಗಿ ತಮಗೆ ಬೇಕಾದ ಮೀನು ಕಪ್ಪೆ, ಏಡಿಗಳನ್ನು ತಿಂದು ಮರಿಗಳಿಗೆ ಬೇಕಾದ ಆಹಾರ ಸಂಗ್ರಹಿಕೊಂಡು ಹೋಗುತ್ತವೆ. ಹಾಗಾಗಿ ಇಲ್ಲಿ ವಿಧವಿಧವಾದ ಪಕ್ಷಿಗಳನ್ನು ನೋಡಬಹುದು.

ಇಲ್ಲಿನ ಸೂರ್ಯಾಸ್ತ ರಮಣೀಯವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬೋರನ ಕಣಿವೆ ತುಂಬಿದಾಗ ಅಣೆಕಟ್ಟೆಯ ಮೇಲೆ ನಿಂತು ಸೂರ್ಯಾಸ್ತವನ್ನು ನೋಡುವುದು ವಿಶೇಷ ಅನುಭವ ನೀಡುತ್ತದೆ.

ಮೈಲುಗಟ್ಟಲೆ ಚಾಚಿದ ನೀರಿನಲ್ಲಿ ಸೂರ್ಯರಶ್ಮಿಯ ಬಿಂಬ ಬಂಗಾರದ ಕಂಬದಂತೆ ಥಳ ಥಳ ಹೊಳೆಯುತ್ತದೆ ನೀವು ಚಿತ್ರದಲ್ಲಿ ನೋಡಬಹುದು. ನೀರಿನಂಚಿನಲ್ಲಿ ಪ್ರಾರಂಭವಾಗುವ ತೆಂಗಿನ ತೋಟಸಾಲು, ಆ ಸಾಲು ತೋಟಗಳ ಮರೆಯಲ್ಲಿ ಅಲ್ಲೊಂದು ಇಲ್ಲೊಂದು ಹಳ್ಳಿಗಳು.

ಮಧ್ಯೆ ಮಧ್ಯೆ ಅಲ್ಲಲ್ಲಿ ಬಯಲು ಮತ್ತು ಹೊಲಗಳು. ಇವೆಲ್ಲವುಗಳನ್ನು ದಾಟಿ ದೂರದಲ್ಲಿ #ಗವಿರಂಗಸ್ವಾಮಿಯ ಗುಡ್ಡ, ಆ ಗುಡ್ಡದ ನೆತ್ತಿಯ ಮೇಲೆ ಸೂರ್ಯದೇವ ಬಾನಂಚಿಗಿಳಿಯುವ ದೃಶ್ಯ ನಯನ ಮನೋಹರ.

ಸಮೀಪದಲ್ಲಿಯೇ ನೂತನವಾಗಿ ನಿರ್ಮಿಸಿರುವ #ಸಾಯಿಬಾಬಾ ಮಂದಿರವಿದೆ. ಇಲ್ಲಿನ ಉದ್ಯಾನವನದಲ್ಲಿ ಅನೇಕ ಔಷದೀಯ ಸಸ್ಯಗಳಿವಗ. ಒಂದು ದಿನದ ಪ್ರವಾಸಕ್ಕೆ ಹೇಳಿಮಾಡಿಸಿದಂತಿದೆ ಬೋರನ ಕಣಿವೆ ಜಲಾಶಯ.

ಜಿಲ್ಲಾಡಳಿತದನಿರ್ಲಕ್ಷ್ಯದಿಂದಹಾಳಾಗುತ್ತಿದೆ

ತುಮಕೂರು ಜಿಲ್ಲೆಯಲ್ಲಿ ಇದುವರೆಗೆ ಎಷ್ಟು ಜನ ಜಿಲ್ಲಾಧಿಕಾರಿಗಳು ಬಂದು ಹೋಗಿದ್ದಾರೆ. ಜಿಲ್ಲಾಡಳಿತಕ್ಕೆ ಒಳಪಟ್ಟಿರುವ ಬೋರನ ಕಣಿವೆ ಎಷ್ಟು ಅಧಿಕಾರಿಗಳಿಗೆ ಗೊತ್ತಿದೆಯೋ ತಿಳಿಯದು. ಅವರಲ್ಲಿ ಒಬ್ಬರು ಭೇಟಿ ನೀಡಿದ್ದರು ಅಣೆಕಟ್ಟು ಇಂದು ಹೀಗಿರುತ್ತಿರಲ್ಲಿಲ್ಲ, ಸುವ್ಯವಸ್ಥೆಯಲ್ಲಿ ಕಂಗೊಳಿಸುತ್ತಿತ್ತು.

ಸಂಬಂಧಪಟ್ಟ ಶಾಸಕರಾಗಲಿ, ಸಚಿವರುಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸದಿರುವುದರ ಫಲವಾಗಿ #ಶಿಥಿಲಾವಸ್ಥೆಗೆ ತಲುಪುತ್ತಿದೆ. ಇಂತಹ ಐತಿಹಾಸಿಕ ಹಿನ್ನಲೆ ಹೊಂದಿರುವ ಅಣೆಕಟ್ಟು ಮುಂದಿನ ತಲೆಮಾರಿಗೆ ಫೋಟೋಗಳಲ್ಲಿ ತೋರಿಸ ಬೇಕಾದ ಸನ್ನಿವೇಶ ಎದುರಾಗುತ್ತದೆ.

ದಯಮಾಡಿ ಸಂಬಂಧಿಸಿದ ಅಧಿಕಾರಿಗಳು, ಶಾಸಕರು, ಸಚಿವರುಗಳು ಇನ್ನಾದರೂ ಇತ್ತ ಗಮನ ಹರಿಸಿ ಸರಿಪಡಿಸಲಿ, ಸ್ವಾತಂತ್ರ್ಯ ಪೂರ್ವ ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಇಂತಹ ಐತಿಹಾಸಿಕ ಜಲಾಶಯವನ್ನು ಉಳಿಸಿ ನೂರಾರು ಸಾವಿರಾರು ಜನರ ಬದುಕಿಗೆ ಆಶ್ರಯವಾಗಬೇಕಿದೆ.🙏🏻🙏🏻🙏🏻

ಧನ್ಯವಾದಗಳು.

ಕೃಪೆ :- ಮಧು ಗೌಡ

LEAVE A REPLY

Please enter your comment!
Please enter your name here

Most Popular

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಅವರು, ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಬೆಂಗಳೂರು ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಅವರು, ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕನ್ನಡದ ಬಿಗ್ ಬಾಸ್...

15 ದಿನಗಳಲ್ಲಿ ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಗುತ್ತಿಗೆದಾರರ ಸಂಘದ ಎಚ್ಚರಿಕೆ

ರಾಜ್ಯದ ಗುತ್ತಿಗೆದಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ರಾಜ್ಯ ಗುತ್ತಿಗೆದಾರರ ಸಂಘದ ಮನವಿಬೆಂಗಳೂರು ಜನವರಿ 20: ಕೋವಿಡ್‌ - 19 ಸಂಕಷ್ಟ ರಾಜ್ಯದಲ್ಲಿ ಆವರಿಸಿದ ನಂತರ ರಾಜ್ಯ ಸರಕಾರವು ನಮ್ಮೆಲ್ಲಾ ವಹಿವಾಟುಗಳಿಗೆ...

ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿದ ಸಚಿವರು

ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿದ ಸಚಿವರು

ನವೋದಯ ಬಳಗದ ವತಿಯಿಂದ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ವಿಶೇಷ ತರಬೇತಿ ಶಾಲೆ

ಬಹುದಿನಗಳ ಕನಸು ನನಸಾದ ದಿನವಿದು. ನವೋದಯ ಬಳಗದ ವತಿಯಿಂದ ಈ ವರ್ಷ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಬೇತಿ ಶಾಲೆಯನ್ನು ತೆರೆಯಲಾಗಿದೆ.

Recent Comments