Friday, January 22, 2021
Home ಶಿರಾ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಶಿರಾ ತಾಲ್ಲೂಕು ಶಾಖೆ ವತಿಯಿಂದ ಭೀಮ ಕೊರೆಂಗಾವ್ ವಿಜಯೋತ್ಸವ...

ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಶಿರಾ ತಾಲ್ಲೂಕು ಶಾಖೆ ವತಿಯಿಂದ ಭೀಮ ಕೊರೆಂಗಾವ್ ವಿಜಯೋತ್ಸವ ಆಚರಣೆ

ಶಿರಾ

ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಶಿರಾ ತಾಲ್ಲೂಕು ಶಾಖೆ ವತಿಯಿಂದ ಭೀಮ ಕೊರೆಂಗಾವ್ ವಿಜಯೋತ್ಸವ ಆಚರಣೆ

ಪ್ರತಿಯೊಂದು ಹೋರಾಟದ ಪ್ರೇರಣೆ ಈ ಕೊರೆಂಗಾವ್ ದಂಗೆ :ಟೈರ್ ರಂಗನಾಥ್ ಅಭಿಮತ
ಶಿರಾ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷರಾದ ಟೈರ್ ರಂಗನಾಥ್ ರವರು ಮಾತನಾಡಿ ಕೊರೆಂಗಾವ್ ಯುದ್ದ ನಮ್ಮೆಲ್ಲರ ಪ್ರೇರಣೆ ಈ ದೇಶದಲ್ಲಿ ಸ್ವಾಭಿಮಾನಕ್ಕಾಗಿ ನಡೆದ ಯುದ್ದ ಅಂತ ಯಾವುದಾದರೂ ನಡೆದಿದ್ದರೆ

ಅದು ಭೀಮ ಕೊರೆಂಗಾವ್ ಯುದ್ದ ಇದರ ಮುಂದಾಳತ್ವವನ್ನು ಸಿದ್ದನಾಕ ಮತ್ತು ಅವರ 500ವೀರ ಮಹರ್ ಯೋಧರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ದಲಿತರಿಗೆ ಹಿಂದುಳಿದವರಿಗೆ ಶಿಕ್ಷಣ ಸಮಾನತೆ ಸಿಗಬೇಕೆಂದು ಹೋರಾಟ ನಡೆಸಿದರು 1818 ರ ಜನವರಿ 1 ರಂದು ಮಹಾರಾಷ್ಟ್ರದ ಭೀಮಾ ತೀರದಲ್ಲಿ ಸುಮಾರು 30,000 ಪೇಶ್ವೇಗಳನ್ನ ಸೆದೆ ಬಡಿದು ವಿಜಯ ಸಾಧಿಸಿದ್ದು ಇದನ್ನು ನಮ್ಮ ಇತಿಹಾಸದಲ್ಲಿ ಎಲ್ಲಿಯೂ ನಮೂದಿಸಿರುವುದಿಲ್ಲ

ಇದು ಈ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ತಾರತಮ್ಯ ಇಂತಹ ಅದೆಷ್ಟೋ ಮುಚ್ಚಿಟ್ಟ ಇತಿಹಾಸವನ್ನ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೊರತೆಗೆದು ನಮ್ಮೆಲ್ಲರಿಗೂ ತಿಳಿಸಿದ್ದಾರೆ ಇವತ್ತಿನ ಯುವ ಸಮುದಾಯ ಅದನ್ನ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು ಎಂದರು

ಸಿಪಾಯಿ ದಂಗೆಗೆ ಮೊದಲೇ ನಡೆದಿದ್ದ ದಂಗೆ ಭೀಮ ಕೊರೆಂಗಾವ್ ದಂಗೆ ಇದರ ಮುಂದಾಳತ್ವವನ್ನು ವಹಿಸಿದ್ದ ಸಿದ್ದನಾಕ ಬ್ರಿಟೀಷ್ ಸೈನ್ಯದಲ್ಲಿ ಬಹುದೊಡ್ಡ ನಾಯಕನಾಗಿ ಒಳ್ಳೆಯ ಯುದ್ಧ ನಿಪುಣನಾಗಿ ಕೆಲಸ ಮಾಡುತ್ತಿದ್ದನ್ನು ಸಹಿಸದ ಪೇಶ್ವೆಗಳು ಅಸ್ಪೃಶ್ಯರ ಮೇಲೆ ಪದೇ ಪದೇ ದಬ್ಬಾಳಿಕೆ ನಡೆಸುತ್ತಿದ್ದರು ಅದನ್ನ ಸಹಿಸದೆ ದಂಗೆ ಎದ್ದು ಬಹುದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದರು ಎಂದು ಹುಲಿಕುಂಟೆ ಹೋಬಳಿ ಸಂಯೋಜಕ ಭೂತರಾಜು ತಿಳಿಸಿದರು

ಇದೇವೇಳೆ ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣನಾಯ್ಕಾ ರವರು ಮಾತನಾಡಿ ಶಿರಾ ಜನತೆಗೆ ಭೀಮ ಕೊರೆಂಗಾವ್ ಯುದ್ಧದ ಬಗ್ಗೆ ಪರಿಚಯ ಮಾಡುತ್ತಿರುವ ಸಂಘಟಕರಿಗೆ ಧನ್ಯವಾದಗಳನ್ನು ತಿಳಿಸಿದರು


ಕಾರ್ಯಕ್ರಮದಲ್ಲಿ ಶ್ರೀರಂಗಪ್ಪ, ಹುಣಸೇಕಟ್ಟೆ ನಾಗರಾಜು, ನಿಲಯ ಪಾಲಕರಾದ ಹನುಮಂತರಾಯಪ್ಪ,ಹುಳುಲಯ್ಯ ನವರು ಮತ್ತು ಆರಕ್ಷಕ ಠಾಣೆ ವೆಂಕಟೇಶ್ ರವರು, ರಂಗೇಗೌಡ ರವರು ಹಾಗೂ ನರಸಿಂಹಮೂರ್ತಿ, ರಾಜು ಕೆ ಖಜಾಂಚಿ, ಗೋಪಾಲಕೃಷ್ಣ ಬಸವನಹಳ್ಳಿ, ಗೋಪಾಲ್ ಹುಂಜಿನಾಳ್ ಕಾರ್ತಿಕ್, ಕಾರಳಪ್ಪ, ಮಹೇಶ್, ರಂಗನಾಥ್,ಜಯಣ್ಣ ಮುಂತಾದವರು ಉಪಸ್ಥಿತರಿದ್ದರು

ಅಂಜನ್ ಕುಮಾರ್
9113551299

LEAVE A REPLY

Please enter your comment!
Please enter your name here

Most Popular

15 ದಿನಗಳಲ್ಲಿ ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಗುತ್ತಿಗೆದಾರರ ಸಂಘದ ಎಚ್ಚರಿಕೆ

ರಾಜ್ಯದ ಗುತ್ತಿಗೆದಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ರಾಜ್ಯ ಗುತ್ತಿಗೆದಾರರ ಸಂಘದ ಮನವಿಬೆಂಗಳೂರು ಜನವರಿ 20: ಕೋವಿಡ್‌ - 19 ಸಂಕಷ್ಟ ರಾಜ್ಯದಲ್ಲಿ ಆವರಿಸಿದ ನಂತರ ರಾಜ್ಯ ಸರಕಾರವು ನಮ್ಮೆಲ್ಲಾ ವಹಿವಾಟುಗಳಿಗೆ...

ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿದ ಸಚಿವರು

ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿದ ಸಚಿವರು

ನವೋದಯ ಬಳಗದ ವತಿಯಿಂದ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ವಿಶೇಷ ತರಬೇತಿ ಶಾಲೆ

ಬಹುದಿನಗಳ ಕನಸು ನನಸಾದ ದಿನವಿದು. ನವೋದಯ ಬಳಗದ ವತಿಯಿಂದ ಈ ವರ್ಷ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಬೇತಿ ಶಾಲೆಯನ್ನು ತೆರೆಯಲಾಗಿದೆ.

ತುಮಕೂರು ಜಿಲ್ಲೆಯ ಬೋರನಕಣಿವೆ ಜಲಾಶಯದ ಇತಿಹಾಸ

ತುಮಕೂರು ಜಿಲ್ಲೆಯ #ಬೋರನಕಣಿವೆ ಜಲಾಶಯದ ಇತಿಹಾಸ: ಅಣೆಕಟ್ಟಿನ ಪರಿಚಯ: ತುಮಕೂರಿನಿಂದ 72 ಕಿಲೋಮೀಟರ್ ದೂರದಲ್ಲಿರುವ ಚಿಕ್ಕನಾಯಕನಹಳ್ಳಿ ತೆಂಗಿನಕಾಯಿಗೆ ಹೆಸರಾಗಿದೆ. ಯಾರನ್ನಾದರೂ ಅಣಕಿಸುವಾಗ...

Recent Comments