Saturday, January 23, 2021
Home ಶಿರಾ ವಾಲ್ಮೀಕಿ ಜಾತ್ರೆ ಕೇವಲ ಒಂದು ಜಾತ್ರೆಯಲ್ಲ ಜನ ಜಾಗೃತಿ ಜಾತ್ರೆ:- ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ...

ವಾಲ್ಮೀಕಿ ಜಾತ್ರೆ ಕೇವಲ ಒಂದು ಜಾತ್ರೆಯಲ್ಲ ಜನ ಜಾಗೃತಿ ಜಾತ್ರೆ:- ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ

ಸಿರಾ

ದಿನಾಂಕ:23:12:2020 ಬುಧವಾರ
ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರು
ಮೂರನೇ ವಷ೯ದ ವಾಲ್ಮೀಕಿ ಜಾತ್ರೆ ಪ್ರಯುಕ್ತ ಸಭೆ ನಡೆಸಿ ವಾಲ್ಮೀಕಿ ಜಾತ್ರೆ ಕೇವಲ ಒಂದು ಜಾತ್ರೆಯಲ್ಲ ಜನ ಜಾಗೃತಿ ಜಾತ್ರೆ ಜಾತಿಗಾಗಿ-ಜಾಗೃತಿ ಜಾಗೃತಿಗಾಗಿ-ಜಾತ್ರೆ


ಈ ಜಾತ್ರೆಯ ಮೂಲಕ ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ತಿಳಿಸಿದರು… ಇಡೀ ವಿಶ್ವಕ್ಕೆ ತನ್ನ ರಾಮಾಯಣ ಮಹಾಗ್ರಂಥದ ಮೂಲಕ ಮಾನವೀಯ ಮೌಲ್ಯಗಳನ್ನು ಕೊಟ್ಟವರು ಮಹಷಿ೯ ವಾಲ್ಮೀಕಿಯವರು, ಈ ಮಹಾಗುರುವಿನ ಜಾತ್ರೆ ಮಾಡುವುದರ ಮೂಲಕ ನಾವೆಲ್ಲರೂ ಸಂಘಟಿತರಾಗಿ ನಮ್ಮ ನ್ಯಾಯಬದ್ಧವಾಗಿ ಸಿಗಬೇಕಾದ ಹಕ್ಕುಗಳನ್ನು ಪಡೆಯಬೇಕು

ನಾವು ಈ ದೇಶದ ಸಂವಿಧಾನಕ್ಕೆ ಗೌರವಿಸಿ ಕಾನೂನಿಗೆ ತಲೆಬಾಗಿ ಪರಂಪರಾಗತವಾದ ನಮ್ಮ ಕುಲಕಸುಬನ್ನು ಬಿಟ್ಟೆವು ಆದರೆ ಇಂದು ನಮಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಮೀಸಲಾತಿಗಾಗಿ ಹೋರಾಟ ಮಾಡಬೇಕಾಗಿರುವುದು ಬೇಸರದ ಸಂಗತಿ, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಈಗಿರುವ 3% ಮೀಸಲಾತಿ ಯನ್ನು 7.5% ಹೆಚ್ಚಿಸಬೇಕೆಂಬ ನಮ್ಮ ಬೇಡಿಕೆ ನ್ಯಾಯಯುತವಾಗಿದೆ, ಆದರೆ ಈ ನಮ್ಮ ಹೋರಾಟವನ್ನು ಹತ್ತಿಕ್ಕಲು ರಾಜ್ಯದಲ್ಲಿ ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿವೆ.

ಇಲ್ಲಿ ನಮಗೆ ಉಣ್ಣಲು ಅನ್ನವಿಲ್ಲ ಆದರೆ ನಾವು ಉಣ್ಣುವ ಅನ್ನಕ್ಕೆ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದಾರೆ… ನಾವು ಇದೆಲ್ಲವನ್ನು ಗಮನಿಸುತ್ತಿದ್ದೇವೆ. ನಮ್ಮ ನ್ಯಾಯಯುತ ಬೇಡಿಕೆ ಈಡೇರದೆ ಇದ್ದರೆ 1857 ಬೇಡರ ದಂಗೆಯಂತೆ ಮತ್ತೊಮ್ಮೆ ರಾಜಧಾನಿಯ ಶಕ್ತಿ ಕೇಂದ್ರದಲ್ಲಿ ನಮ್ಮ ಬಲ ಪ್ರದಶ೯ನ ತೋರಿಸಬೇಕಾಗುತ್ತದೆ.

ಈಗಾಗಲೇ ಮುಖ್ಯಮಂತ್ರಿಗಳು ಸಕಾ೯ರದ ನಮ್ಮ ಜನಪ್ರತಿನಿಧಿಗಳು ನಮಗೆ ಭರವಸೆ ನೀಡಿದ್ದಾರೆ, ಆದ್ದರಿಂದ ಶಾಂತರೀತಿಯಲ್ಲಿ ಇರೋಣ ಆನಂತರ ಅಂತಿಮವಾದ ತೀಮಾ೯ನ ತೆಗೆದುಕೊಳ್ಳೋಣ. ಎಂದು ತಿಳಿಸಿದರು
ನಂತರ ವಾಲ್ಮೀಕಿ ಸೇವಾ ಸಮಿತಿ [ವಿ. ಎಸ್. ಎಸ್] ಪದಾದಿಕಾರಿಗಳನ್ನ ಆಯ್ಕೆ ಮಾಡಿ. ಜಾತ್ರಾ ಮಹೋತ್ಸವದ ವಾಲ್ ಪೋಸ್ಟರ್ ಬಿಡುಗಡೆ ಮಾಡಲಾಯಿತು,


ಸಭೆಯಲ್ಲಿ ಶಿರಾ ಸಮಸ್ತ ನಾಯಕ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ವಾಲ್ಮೀಕಿ ಜಾತ್ರೆ ಮೂರನೇ ಜಾತ್ರಾ ಸಮಿತಿ ಅಧ್ಯಕ್ಷರಾದ ಧರಣಿ ಕುಮಾರ್ ಮಾಜಿ ಅಧ್ಯಕ್ಷರು ಪ್ರಸನ್ನಕುಮಾರ್ ವಾಲ್ಮೀಕಿ ಬ್ಯಾಂಕ್ ಸಿಇಒ ರಂಗರಾಜ್ .ವಾಲ್ಮೀಕಿ ಬ್ಯಾಂಕ್ ಅಧ್ಯಕ್ಷರಾದ ರಾಮಚಂದ್ರಯ್ಯ. ಮನೋಹರ ನಾಯಕ ತಾವರೆಕೆರೆ. ಬಸವರಾಜ ನಾಯಕ ಓಕೇಶ್ ನಾಯಕ. ಅಜಯ್ ಕುಮಾರ್. ಮಣಿಕಂಠ ಸಂತೋಷ್ ಸಂತೆಪೇಟೆ ಮೋಹನ್ ಶಾಗದಡು ನರಸಿಂಹಯ್ಯ ಬುಕ್ಕಪಟ್ಟಣ ಪಾಂಡುರಂಗಯ್ಯ ಹಾಜರಿದ್ದರು…

LEAVE A REPLY

Please enter your comment!
Please enter your name here

Most Popular

15 ದಿನಗಳಲ್ಲಿ ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಗುತ್ತಿಗೆದಾರರ ಸಂಘದ ಎಚ್ಚರಿಕೆ

ರಾಜ್ಯದ ಗುತ್ತಿಗೆದಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ರಾಜ್ಯ ಗುತ್ತಿಗೆದಾರರ ಸಂಘದ ಮನವಿಬೆಂಗಳೂರು ಜನವರಿ 20: ಕೋವಿಡ್‌ - 19 ಸಂಕಷ್ಟ ರಾಜ್ಯದಲ್ಲಿ ಆವರಿಸಿದ ನಂತರ ರಾಜ್ಯ ಸರಕಾರವು ನಮ್ಮೆಲ್ಲಾ ವಹಿವಾಟುಗಳಿಗೆ...

ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿದ ಸಚಿವರು

ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿದ ಸಚಿವರು

ನವೋದಯ ಬಳಗದ ವತಿಯಿಂದ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ವಿಶೇಷ ತರಬೇತಿ ಶಾಲೆ

ಬಹುದಿನಗಳ ಕನಸು ನನಸಾದ ದಿನವಿದು. ನವೋದಯ ಬಳಗದ ವತಿಯಿಂದ ಈ ವರ್ಷ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಬೇತಿ ಶಾಲೆಯನ್ನು ತೆರೆಯಲಾಗಿದೆ.

ತುಮಕೂರು ಜಿಲ್ಲೆಯ ಬೋರನಕಣಿವೆ ಜಲಾಶಯದ ಇತಿಹಾಸ

ತುಮಕೂರು ಜಿಲ್ಲೆಯ #ಬೋರನಕಣಿವೆ ಜಲಾಶಯದ ಇತಿಹಾಸ: ಅಣೆಕಟ್ಟಿನ ಪರಿಚಯ: ತುಮಕೂರಿನಿಂದ 72 ಕಿಲೋಮೀಟರ್ ದೂರದಲ್ಲಿರುವ ಚಿಕ್ಕನಾಯಕನಹಳ್ಳಿ ತೆಂಗಿನಕಾಯಿಗೆ ಹೆಸರಾಗಿದೆ. ಯಾರನ್ನಾದರೂ ಅಣಕಿಸುವಾಗ...

Recent Comments