ಕರ್ನಾಟಕ ಸರ್ಕಾರವು ಯುವಜನ ಸಬಲೀಕರಣ ನಿಗಮ ಸ್ಥಾಪಿಸುವಂತೆ ಕೋರಿ ಇಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಚಿವರಿಗೆ ಕರ್ನಾಟಕ ಯುವ ಸಮನ್ವಯದ ಮೂಲಕ ಕೋರಿಕೆ ಪತ್ರ ಸಲ್ಲಿಸಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕಾಲಕಾಲಕ್ಕೆ ಶಿಫಾರಸ್ಸುಗಳನ್ನು ನೀಡಲು, ಕರ್ನಾಟಕ ರಾಜ್ಯ ಯುವ ನೀತಿಯ ಅನುಷ್ಠಾನದ ಮೇಲ್ವಿಚಾರಣೆ ನಡೆಸಲು ಸಹಾಯಕವಾಗುವಂತೆ ಸ್ವಾಮಿ ವಿವೇಕಾನಂದ ಯುವಜನ ಸಬಲೀಕರಣ ನಿಗಮ ಸ್ಥಾಪಿಸಲು ಕರ್ನಾಟಕ ಸರ್ಕಾರ 2013 ರಲ್ಲಿ ನಿರ್ಧರಿಸಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಸರ್ಕಾರ ಈಗಲಾದರೂ ಅದನ್ನು ಸ್ಥಾಪಿಸುವಂತೆ ಕರ್ನಾಟಕ ಯುವ ಸಮನ್ವಯ ಒತ್ತಾಯಿಸುತ್ತದೆ.
ತಿಪ್ಪೇಸ್ವಾಮಿ ಕೆ.ಟಿ.
ರಾಜ್ಯ ಸಂಚಾಲಕರು
ಕರ್ನಾಟಕ ಯುವ ಸಮನ್ವಯ