Tuesday, April 13, 2021
Home ಶಿರಾ ಶಿರಾ ತಾಲೂಕು ಆಫೀಸಿನ 'ಆಧಾರ್ ಪ್ರಸನ್ನ' ಇಂದಿನ ನಮ್ಮ ಪಬ್ಲಿಕ್ ಹೀರೋ.

ಶಿರಾ ತಾಲೂಕು ಆಫೀಸಿನ ‘ಆಧಾರ್ ಪ್ರಸನ್ನ’ ಇಂದಿನ ನಮ್ಮ ಪಬ್ಲಿಕ್ ಹೀರೋ.

ಆಧಾರ್ ಪ್ರಸನ್ನ ಅನ್ನುವ ಹೆಸರು ನೊಂದವರ ಪಾಲಿನ ಬರವಸೆ..

ತಾಲೂಕ್ ಆಫೀಸಿನ ಕೆಲಸ ಅಂತಂದ್ರೆ ಜನರಿಗೆ ಒಂದು ಕ್ಷಣ ಬೇಜಾರಾಗೋದು ಅಕ್ಷರಸಹ ಸತ್ಯ ಅಲ್ಲಿನ ಕ್ಯೂ, ಸರ್ವರ್ ಡೌನ್, ನಾಳೆಬಾ, ಇವಾಗ ಆಗಲ್ಲ, ಇದಕ್ಕೆ ಇನ್ನೊಂದು ಡಾಕ್ಯುಮೆಂಟ್ಸ್, ಕಡಿಮೆ ಇದೆ ಅನ್ನುವ ಉತ್ತರಗಳೇ ಕೇಳಿ ಕೇಳಿ ಜನರಿಗೆ ಬೇಜಾರಾಗೋದು ಸಾರ್ವಕಾಲಿಕ ಸತ್ಯ.

ಶಿರಾ ತಾಲೂಕಿನ ‘ತಾಲೂಕು ಆಫೀಸಿನಲ್ಲಿ’ ಆಧಾರ್ ವಿಭಾಗದ ‘ಪ್ರಸನ್ನ’ ಎಂಬುವರು ನೊಂದವರ ಪಾಲಿನ ಬಡವರ, ಶ್ರಮಿಕರ, ರೈತರು ಅವಿದ್ಯಾವಂತರಿಗೆ ಸಹಾಯ ಮಾಡುವುದರ ಜೊತೆಗೆ ತಿಳಿಯದ ವಿಷಯಗಳನ್ನು ಮನದಟ್ಟಾಗುವಂತೆ ತಿಳಿಹೇಳುವ, ವಯಸ್ಸಾದವರನ್ನು ಸತ್ಕರಿಸುವ ರೀತಿ ಜನರಿಗೆ ತಾಲೂಕ್ ಆಫೀಸಿನಲ್ಲೇ ಇಂಥವರಿಂದ ಕೆಲಸ ಆಗುತ್ತೆ ಅನ್ನುವ ಭರವಸೆ ಚಿಗುರೊಡೆದಿದೆ.

ಜೊತೆಗೆ ಇವರ ಇನ್ನೊಂದು ಸಾಧನೆಯೆಂದರೆ ಲಾಕ್ಡೌನ್ ಸಂದರ್ಭದಲ್ಲಿ ಉಚಿತ ರೇಷನ್ ಪಡೆಯಬಹುದು ಎನ್ನುವ ಸರ್ಕಾರದ ಘೋಷಣೆಗೆ ಇಲ್ಲಿ ಜನರ ದಂಡೇ ನೆರೆದಿತ್ತು. ಹಾಗೆ ಗಾರೆ ಕೆಲಸ ಮಾಡುವವರಿಗೆ ಸರ್ಕಾರದಿಂದ rs.5000 ಗೌರವಧನ ಜನರು ತೆಗೆದುಕೊಳ್ಳುವ ಸಂದರ್ಭದಲ್ಲಿ ಜನಜಂಗುಳಿ ಯಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬರೆದಿದ್ದ ಸಂದರ್ಭದಲ್ಲಿ ಅವರು ಇದನ್ನೆಲ್ಲ ಯಶಸ್ವಿಯಾಗಿ ನೆರವೇರಿಸಿದರು.

‘Thumb ಇಂಪ್ರೆಷನ್” ಕೊಡುವಾಗ ಅನೇಕ ಜನರ ರೇಖೆಗಳು ಅಳಿಸಿ ಹೋದ ಕಾರಣ ಇವರು ಬೆರಳಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಹಿಡಿದು ವಿಶೇಷ ಕಾಳಜಿವಹಿಸಿ ಅದೆಷ್ಟೋ ಜನರಿಗೆ ಸರ್ಕಾರದಿಂದ ಸಹಾಯಧನ ಕೊಡಿಸುವಲ್ಲಿ ಇವರ ಪಾತ್ರ ಮಹತ್ವದ್ದು..
ಇವತ್ತಿನ ನಮ್ಮ ಪಬ್ಲಿಕ್ ಹೀರೋ ‘ಆಧಾರ್ ಪ್ರಸನ್ನ ‘ ಶಿರಾ ತಾಲೂಕಿನ ಸಾರ್ವಜನಿಕರು ಆಧಾರ್ ಸಂಬಂಧಪಟ್ಟ ಮಾಹಿತಿಗೆ ಪ್ರಸನ್ನ ರವರನ್ನು ಸಂಪರ್ಕಿಸಬಹುದು..
ಪ್ರಸನ್ನ ಅವರ ಕಾರ್ಯ ಜನರಿಗೆ ಸ್ಪಂದಿಸುವ ರೀತಿ ಇದೇ ರೀತಿ ಮುಂದುವರೆಯಲಿ ಅಸಾಯಕ ಜನರಿಗೆ ಇಂಥವರಿಂದ ಒಂದಷ್ಟು ಸಹಾಯವಾಗಲಿ ಅನ್ನುವುದೇ ನಮ್ಮ ಆಶಯ…

ವಿಶೇಷ ವರದಿ :- veeru patil

LEAVE A REPLY

Please enter your comment!
Please enter your name here

Most Popular

ಶನಿ ದೇವರ ಸ್ಮರಣೆ ಮಾಡುತ್ತಾ ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ.

ನಿಮ್ಮ ಸಮಸ್ಯೆಗೆ ಇಲ್ಲಿ 1 ದಾರಿದೀಪ ದಾಮೋದರ ಭಟ್ ಅವರಿಂದ ದಿನ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ದಾಮೋದರ ಭಟ್ ಅವರಿಂದ...

ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ

ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿಯ ತಾಯಿಯ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿಪಂಡಿತ್ ಶ್ರೀದಾಮೋದರ...

ಶ್ರೀ ರಾಯರ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಶ್ರೀ ರಾಯರ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿಪಂಡಿತ್ ಶ್ರೀದಾಮೋದರ ಭಟ್ ದೈವಶಕ್ತಿ ಜ್ಯೋತಿಷ್ಯರು. ಪ್ರಧಾನ...

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಅವರು, ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಬೆಂಗಳೂರು ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಅವರು, ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕನ್ನಡದ ಬಿಗ್ ಬಾಸ್...

Recent Comments